‘ಮಿ|| ಮೊಮ್ಮಗ ಮುಕ್ತಾಯ ಹಂತದಲ್ಲಿ
Posted date: 19 Wed, Aug 2015 – 10:02:15 AM

ಸುಮುಖ ಎಂಟರ್‌ಪ್ರೈಸಸ್ ಲಾಂಛನದಲ್ಲಿ, ರಘುಗೌಡ ನಿರ್ಮಾಣದ ಮಿ||ಮೊಮ್ಮಗ ಚಿತ್ರದ ಚಿತ್ರೀಕರಣ ಕನಕಪುರ ರಸ್ತೆ, ಬನ್ನೇರುಘಟ್ಟ, ಶೃಂಗೇರಿ, ಮುಂತಾದೆಡೆಗಳಲ್ಲಿ ರವಿ, ರಂಗಾಯಣ ರಘು, ಓವಿಯಾ, ಅವಿನಾಶ್, ಮುಂತಾದವರು ಅಭಿನಯಿಸಿದ ದೃಶ್ಯಗಳು ಸತತವಾಗಿ ನಡೆದು ಮುಕ್ತಾಯ ಹಂತ ತಲುಪಿದೆ. ತಾತ ಮತ್ತು  ಮೊಮ್ಮಗನ ಬಾಂಧವ್ಯದ ಕಥಾವಸ್ತುವುಳ್ಳ ಈ ಚಿತ್ರವು ಕಳೆದ ವರ್ಷ ತಮಿಳಿನಲ್ಲಿ ಯಶಸ್ವೀ ಚಿತ್ರಗಳಲ್ಲೊಂದಾದ ಮಂಜಾಪೈ ಚಿತ್ರದ ರೀಮೇಕ್.  ಮೂಲ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ರಾಘವನ್, ಕನ್ನಡದಲ್ಲಿ ಕಥೆ-ಚಿತ್ರಕತೆ-ನಿರ್ದೇಶನ ಮಾಡುತ್ತಿದ್ದಾರೆ. ಸಂಭಾಷಣೆ - ಮಳವಳ್ಳಿ ಸಾಯಿಕೃಷ್ಣ, ಸಾಹಿತ್ಯ- ನಾಗೇಂದ್ರ ಪ್ರಸಾದ್, ಮಳವಳ್ಳಿ ಸಾಯಿಕೃಷ್ಣ, ಸಂಗೀತ-ರಘುನಂದನ್, ಸಂಕಲನ - ದೇವ ರಾಘವನ್, ಕಲೆ-ಸೋಮಶೇಖರ್, ಸಾಹಸ - ಶಿವು, ನೃತ್ಯ-ದಿನೇಶ್, ಸಹನಿರ್ದೇಶನ-ನವರಸನ್, ನಿರ್ವಹಣೆ - ದಾಡಿ ರಮೇಶ್, ತಾರಾಗಣದಲ್ಲಿ - ರವಿ, ಓವಿಯಾ (ಕಿರಾತಕ ಚಿತ್ರದ ನಾಯಕಿ), ರಂಗಾಯಣ ರಘು, ಅವಿನಾಶ್, ಕುರಿ ಪ್ರತಾಪ್, ಮುಂತಾದವರಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed